ಟಿಕ್ ಟಾಕ್ ಮಾಡುವ ಯುವತಿಯರೇ ಹುಷಾರ್! ಟಿಕ್ ಟಾಕ್ ಮಾಡುವ ಮೊದಲು ಇದನ್ನು ಓದಿ!!

समाचार

ಚೈನಾದಲ್ಲಿ ಡೋಯಿನ್ ಎಂದು ಕರೆಯಲಾಗುವ ಟಿಕ್ ಟಾಕ್, ಸಣ್ಣ ವೀಡಿಯೊಗಳನ್ನು ರಚಿಸಲು ಮತ್ತು ಶೇರ್ ಮಾಡಲು ಒಂದು ಸೋಷಿಯಲ್ ಮಾಧ್ಯಮ ಅಪ್ಲಿಕೇಶನ್ ಆಗಿದ್ದು.  ಇದರ ಓನರ್ ಬೈಟೆಡಾನ್ಸ್, ಈ ಮಾಧ್ಯಮವನ್ನು ಸೆಪ್ಟೆಂಬರ್ 2016 ರಲ್ಲಿ ಚೀನಾದಲ್ಲಿ ಡೌಯಿನ್ ಎಂದು ಪ್ರಾರಂಭಿಸಲಾಯಿತು ಮತ್ತು ಒಂದು ವರ್ಷದ ನಂತರ ಟಿಕ್ ಟಾಕ್ ಎಂದು ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು.  ಇದು ಏಷ್ಯಾ, ಯುನೈಟೆಡ್ ಸ್ಟೇಟ್ಸ್, ಮತ್ತು ಜಗತ್ತಿನ ಇತರ ಭಾಗಗಳಲ್ಲಿ ಪ್ರಮುಖ ಕಿರು ವಿಡಿಯೋ ವೇದಿಕೆಯಾಗಿದೆ. 2018 ರಲ್ಲಿ, ಅಪ್ಲಿಕೇಶನ್ ಜನಪ್ರಿಯತೆಯನ್ನು ಗಳಿಸಿತು ಮತ್ತು ಅಕ್ಟೋಬರ್ನಲ್ಲಿ 2018 ರಲ್ಲಿ ಯು. ಎಸ್ ನಲ್ಲಿ ಹೆಚ್ಚು ಡೌನ್ಲೋಡ್ ಮಾಡಿದ ಅಪ್ಲಿಕಶನ್ಗಳಲ್ಲಿ ಒಂದು ಇದು.

ಇಡೀ ದೇಶ ದೇಶವನ್ನೇ ಆಕ್ಟಿಂಗ್ ಮತ್ತು ಡ್ಯಾನ್ಸ್ ಗಳ ಮುಖಾಂತರ ತಲ್ಲಣಗೊಳಿಸುತ್ತಿರುವ ಅಪ್ಲಿಕೇಶನ್ ಗಳಲ್ಲಿ ಟಿಕ್ ಟಾಕ್ ಕೂಡ ಒಂದು, ಈ ಅಪ್ಲಿಕೇಶನ್ ಉಪಯೋಗಿಸಿಕೊಂಡು ಹೆಣ್ಣು ಮಕ್ಕಳು ಗಂಡಸರು ಮತ್ತು ಎಲ್ಲಾ ವರ್ಗದ ವಯೋಮಾನದವರು ಕೂಡ ಈ ಆಪ್ ಅನ್ನು ಉಪಯೋಗಿಸುತ್ತಿದ್ದು ಇದರಲ್ಲಿ ಬರುವ ಎಲ್ಲ ಸಣ್ಣ ಸಣ್ಣ ವಿಡಿಯೋಗಳು ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತವೆ ಇದರಿಂದ ಎಷ್ಟೋ ಜನ ಫೇಮಸ್ ಕೂಡ ಆದರೂ.

ಆದರೆ ಇದೇ ಅಪ್ಲಿಕೇಶನ್ ಇಂದ ಕೆಲವು ಹೆಣ್ಣುಮಕ್ಕಳು ಗಳು ಅರ್ಧಂಬರ್ಧ ಬಟ್ಟೆ ಹಾಕಿಕೊಂಡು ವಿಡಿಯೋ ಮಾಡೋಕೆ ಹೊರಟರು, ಇದರಿಂದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಅಲ್ಲದೆ, ಟ್ರೊಲ್ ಗಳ ಕೈಗೆ ಸಿಕ್ಕಿ ಅವರು ವೀಡಿಯೋಗಳನ್ನು ಇಟ್ಟುಕೊಂಡು ಎಡಿಟ್ ಮಾಡಿ ಬೇರೆ ಬೇರೆ ರೀತಿಯಲ್ಲಿ ತೋರಿಸಿದ್ದು ಇದರಿಂದ ಹೆಣ್ಣು ಮಕ್ಕಳ ಮೇಲೆ ಮತ್ತು ಅವರ ತಂದೆ ತಾಯಿಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ..

ಇದರಿಂದ ಹೆಣ್ಣು ಮಕ್ಕಳು ಗಳು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ, ಕಂಡ ಕಂಡವರೆಲ್ಲಾ ವಿಚಿತ್ರವಾಗಿ ಹೆಣ್ಣು ಮಕ್ಕಳನ್ನು ರೇಗಿಸುತ್ತಾ ಇದ್ದಾರೆ, ಇದರಿಂದ ಮನನೊಂದ ಹೆಣ್ಣು ಮಕ್ಕಳು ಗಳು ಮತ್ತು ಅವರ ತಂದೆ ತಾಯಿಗಳು ರಸ್ತೆ ಬದಿಯಲ್ಲಿ ಓಡಾಡುವುದು ಕಷ್ಟವಾಗಿದೆ, ಮತ್ತು ಇದರಿಂದ ಎಷ್ಟೋ ಜನ ವಿಭಿನ್ನವಾಗಿ ವಿಡಿಯೋಗಳನ್ನು ಸೃಷ್ಟಿಸಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ,
ಇನ್ನಾದರೂ ಇಂತಹ ಅಪ್ಲಿಕೇಶನ್ ಗಳನ್ನು ಉಪಯೋಗಿಸುವುದು ಸಲ್ಲದು ಮತ್ತು ತಂದೆ ತಾಯಿಗಳು ಇಂಥ ಅಪ್ಲಿಕೇಶನ್ಗಳನ್ನು ಮಕ್ಕಳು ಉಪಯೋಗಿಸುವಾಗ ಅದನ್ನು ತಡೆಯುವುದು ಉತ್ತಮ ದಾರಿ..

Leave a Reply

Your email address will not be published. Required fields are marked *