ದಮಯಂತಿ ಚಿತ್ರಕ್ಕೆ ಯಾರೂ ಊಹಿಸಲಾರದಷ್ಟು ಸಂಭಾವನೆ ಪಡೆದ ರಾಧಿಕಾ, ಸ್ಯಾಂಡಲ್ ವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿ!!

समाचार

ಚಂದನವನದ ನಟಿ ಸ್ವೀಟಿ ರಾಧಿಕಾ ಅವರು ತಮ್ಮ ಮುಂದೆಬರುವ ‘ದಮಯಂತಿ’ ಚಿತ್ರಕ್ಕೆ ಬರೋಬ್ಬರಿ 1 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿಯೊಂದು ಇತ್ತೀಚಿಗೆ ಹೊರಬಿದ್ದಿದ್ದು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇನ್ನು ರಾಧಿಕಾ ಬೇರೆ ಬೇರೆ ಭಾಷೆಯ ನಟಿಯಾಗಿದ್ದು, ತೆಲುಗು ಚಿತ್ರದಲ್ಲೂ ಸಹ ನಟಿಸಿದ್ದಾರೆ. ಅರುಂಧತಿ, ಭಾಗಮತಿ ಚಿತ್ರದಲ್ಲಿ ನಟಿ ಅನುಷ್ಕಾ ಶೆಟ್ಟಿ ನಟಿಸಿದ್ದ ಚಿತ್ರದ ರೀತಿಯಲ್ಲೇ ಇದೀಗ ಅಂಥದ್ದೇ ಕಥೆಯ ದಮಯಂತಿ ಸಿನಿಮಾ ತಯಾರಾಗುತಿದ್ದು.

ನಿರ್ದೇಶಕರು ನೇನೆಸಿದಂತೆ ಅದರ  ಪಾತ್ರಕ್ಕೆ ತಕ್ಕಂತೆ ರಾಧಿಕಾ ಹೋಲುತ್ತಿದ್ದರು. ಹೀಗಾಗಿ ರಾಧಿಕಾ ಅವರನ್ನು ನಿರ್ದೇಶಕರು ಕೇಳಿದಾಗ ಅವರು ಈ ಸಿನಿಮಾವನ್ನು ಒಪ್ಪಿಕೊಂಡರು. ಹಾಗೂ ದಮಯಂತಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ರಿಲೀಸ್ ಆಗಿದ್ದು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗುತ್ತಿರುವ ಕೋಟಿ ಕೋಟಿ ಬಜೆಟ್ ಚಿತ್ರವಾಗಿದ್ದು, ಇದು ನಾಯಕಿ ಪ್ರಧಾನ ಸಿನಿಮಾ ಎಂದು ಹೇಳಲಾಗಿದ್ದು ಇದು. ನಾಯಕಿ ರಾಧಿಕಾ ಅವರಿಗೆ 1 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎಂದು ಹೇಳಿದ್ದಾರೆ….

ಇನ್ನು ಚಿತ್ರದ ನಿರ್ಮಾಪಕ, ನಿರ್ದೇಶಕ ನವರಸನ್ ಮೊದಲು ಬಾಹುಬಲಿ ಖ್ಯಾತಿಯ ಕನ್ನಡತಿ ಅನುಷ್ಕಾ ಶೆಟ್ಟಿ ಅವರನ್ನು ಸಂಪರ್ಕಿಸಿದ್ದರಂತೆ. ಆದರೆ ಅನುಷ್ಕಾ ಶೆಟ್ಟಿ 2 ವರ್ಷದ ಕಾಲ್ ಶೀಟ್ ಫುಲ್ ಆಗಿದ್ದ ಕಾರಣ ಅಭಿನಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರಂತೆ. ಹೀಗಾಗಿ ಈ ಚಿತ್ರಕ್ಕೆ ರಾಧಿಕಾ ಅವರೇ ಬೇಕೆಂದು ತೀರ್ಮಾನಿಸಿ 80 ಲಕ್ಷ ಅಡ್ವಾನ್ಸ್ ನೀಡಿದ್ದರು ಎಂದು ಹೇಳಲಾಗುತ್ತಿದೆ. ಹಾಗೂ 1 ಕೋಟಿ ರೂ. ಸಂಭಾವನೆ ಪಡೆಯುವ ಮೂಲಕ ರಾಧಿಕಾ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿಯರ ಸ್ಥಾನದಲ್ಲಿ ಮೋದಲಿದ್ದಾರೆ.

ಇದೇ ರೀತಿಯಾದಂತಹ ಇನ್ನೂ ನೂರಾರು ಸಿನಿಮಾಗಳನ್ನು ಇವರು ಮಾಡಲಿ ಹಾಗೂ ನಮ್ಮ ಕನ್ನಡದ ಕರ್ನಾಟಕದ ಕೀರ್ತಿಪತಾಕೆ ಪ್ರಪಂಚದ ಎಲ್ಲಾ ಮೂಲೆಮೂಲೆಗಳಿಗೂ ಪಸರಿಸಲಿ ಎಂಬುವುದು ನಮ್ಮ ಆಶಯ ಅದೇನೇ ಆಗಲಿ ನಮ್ಮ ಸ್ಯಾಂಡಲ್ವುಡ್ನಲ್ಲಿ ಇತ್ತೀಚೆಗೆ ತುಂಬಾ ಉತ್ತಮವಾದ ಸಿನಿಮಾಗಳು ಮೂಡಿಬರುತಿದ್ದು ಪ್ರಪಂಚದ ಎಲ್ಲ ಮೂಲೆಗೂ ಪಂಚ ಭಾಷೆಗಳಾಗಿ ತಲುಪುತ್ತಿವೆ ಇದರ ಜೊತೆಯಲ್ಲಿ ನಮ್ಮ ಸ್ಯಾಂಡಲ್ವುಡ್ ನಟಿಯರು ಯಾವ ಹೀರೋಗಳಿಗೂ ಕಡಿಮೆ ಇಲ್ಲ ಎನ್ನುವ ಹಾಗೆ ಹೆಚ್ಚೆಚ್ಚು ಸಂಭಾವನೆ ಪಡೆಯುವ ಮುಖಾಂತರ ಬೇರೆ ರಾಜ್ಯದ ಅಥವಾ ದೇಶದ ನಟಿಯರನ್ನು ಮೀರಿಸುವಷ್ಟು ಬೆಳೆಯುತ್ತಿದ್ದಾರೆ ಇದನ್ನು ಕಂಡು ಹೆಮ್ಮೆ ಪಡುವಂತಾಗಿದೆ.

Leave a Reply

Your email address will not be published. Required fields are marked *