ಶಂಕರನಾಗ್ ಅವರ ಎದೆ ಝೆಲ್ ಎನ್ನುವಂತೆ ಮಾಡಿದ್ದರಂತೆ ರಾಜಣ್ಣ!!

समाचार

“ಒಂದು ಮುತ್ತಿನ ಕಥೆ ” ಚಿತ್ರ ಅದು, ಸಮುದ್ರದಲ್ಲಿ ಒಂದು ದೃಶ್ಯ ಸನ್ನಿವೇಶಕ್ಕೆ ಶಂಕರ್ ನಾಗ್ ಅವರು ಬಾಂಬೆಯಿಂದ ಒಬ್ಬ ಡ್ಯೂಪ್ ನ ಕರೆಸಿ ಚಿತ್ರೀಕರಣ ಮಾಡುವ ಯೋಜನೆ ಇಟ್ಟುಕೊಂಡಿದ್ದರಂತೆ,
ಆದರೆ ನಮ್ಮ ಸಾರ್ವಬೌಮ ರು ಮಾತ್ರ  ಶಂಕರ್ ಅವರೇ , ನಮ್ಮ ಚಿತ್ರವನ್ನು ಆಸೆಯಿಂದ ನಂಬಿಕೆ ಇಟ್ಟು ನೋಡಲು ಬರುವ ಅಭಿಮಾನಿ ದೇವರುಗಳಿಗೆ ಮೋಸ ಮಾಡುವುದು ಸರಿ ಎಂದು ನನಗೆ ಅನಿಸುತ್ತಿಲ್ಲ, ದಯವಿಟ್ಟು ನನಗೆ ಒಂದು ಅವಕಾಶ ಕೊಟ್ಟು ನೋಡಿ , ಸರಿ ಇಲ್ಲವಾದರೆ ಬೇರೆಯವರನ್ನ ಕರೆಸಿ ಮಾಡಿಸೋಣ ” ಅಂತ ಕೇಳಿಕೊಂಡರಂತೆ.

ಅದಕ್ಕೆ ಶಂಕರ್ ನಾಗ್ ಅವರು  ಎರಡು ನಿಮಿಷ ಸಮುದ್ರದ ಆಳದಲ್ಲಿ ಇರಬೇಕು  ಬಹಳ ಅಪಾಯಕಾರಿ ನಿಮಗೇನಾದರೂ ಆದರೆ ಜನ ನನ್ನನ್ನು ಸುಮ್ಮನೆ ಬಿಡುವುದಿಲ್ಲ ದಯವಿಟ್ಟು ಬೇಡ  ಎಂದು ಹೇಳಿದರಂತೆ…
ನಾನೇ ಮಾಡಿಯೇ ತೀರುತ್ತೇನೆ ಎಂದು ಹೇಳಿದ ರಾಜಣ್ಣ ಆತ್ಮವಿಶ್ವಾಸದಿಂದ ಹಠ ಹಿಡಿದು ಡ್ಯೂಪ್ ಬಳಸದೇ ನೈಜವಾಗಿ ಚಿತ್ರಿಸಲು ನಿರ್ಧರಿಸಿ ಎರಡು ನಿಮಿಷಗಳ ಬದಲಾಗಿ  14 ನಿಮಿಷ ನೀರಿನಲ್ಲಿ ಇದ್ದದ್ದು ಸೋಜಿಗದ ಸಂಗತಿ.. 14 ನಿಮಿಷ ಉಸಿರು ಕಟ್ಟುವುದು ದ್ಯಾನ ಮಾಡುವರಲ್ಲಿ ಮಾತ್ರ ಸಾದ್ಯ ಎಲ್ಲರಿಂದಲೂ ಆಗುವುದಿಲ್ಲ.

ಆಕ್ಟೋಪಸ್ ಜೊತೆ ಕಾದಾಡುವ ಅಂಡರ್ ವಾಟರ್ ಸನ್ನಿವೇಶದ ಚಿತ್ರೀಕರಣಕ್ಕಾಗಿ ವಿದೇಶದಿಂದ ಕಾಮ್ಮರಾಮೆನ್ ಗಳು ಬಂದಿದ್ದರು . ಸಮುದ್ರದಲ್ಲಿ ಯಾವುದೇ ಕೃತಕ ಉಪಕರಣ ಬಳಸದೇ ಯೋಗಾ ಧ್ಯಾನದ ಮೂಲಕ ಉಸಿರನ್ನು ನಿಲ್ಲಿಸಿ ಸತತ 14 ನಿಮಿಷಗಳ ಕಾಲ ಅಣ್ಣಾವ್ರು ಹೊರಗೆ ಬರದೇ ಇದ್ದಾಗ ಶಂಕರ್ ನಾಗ್ ಮತ್ತು ಪಾರ್ವತಮ್ಮ ಸೇರಿದಂತೆ ಇಡೀ ತಂಡಕ್ಕೆ ಏನೋ ಅನಾಹುತ ಆಗಿದೆ ಎಂಬ ಆತಂಕ ಸೃಷ್ಟಿಯಾಗಿ ಎಲ್ಲರಲ್ಲೂ ಭಯತರಿಸಿತಂತೆ.

ಆದರೆ ಅಣ್ಣಾವ್ರು ಮಾತ್ರ 14 ನಿಮಿಷ ನೀರಿನಲ್ಲೇ ಉಸಿರನ್ನು ಬಿಗಿ ಹಿಡಿದು ಚಿತ್ರೀಕರಣವನ್ನ ಯಶಸ್ವಿ ಮಾಡಿ ಹೊರಗೆ ಬಂದಾಗ ಎಲ್ಲರಿಗೂ ನಿಟ್ಟುಸಿರು ಬಿಟ್ಟರಂತೆ ಸುಮಾರು 2ಲೀಟರ್‌ ನೀರನ್ನು ತಮ್ಮ ಶ್ವಾಸಕೋಶದಿಂದ ಹೊರಹಾಕುವ ಈ ದೃಶ್ಯವನ್ನು ಈ ಜಗತ್ತಿನ ಯಾವ ನಟರು ಹಿಂದೆ ಮಾಡಿಲ್ಲ ಮುಂದೆ ಮಾಡಲೂ ಸಾಧ್ಯವಿಲ್ಲ ಎಂದು ಇದನ್ನು ನೋಡಿದ ಶಂಕರ್ ನಾಗ್ ಸೇರಿದಂತೆ ಪ್ರತಿಯೊಬ್ಬರೂ ದಿಗ್ರಮೆಗೊಂಡರಂತೆ.

Leave a Reply

Your email address will not be published. Required fields are marked *