“ನನ್ನ ಮಗಳನ್ನು ಗೌರವಿಸಬೇಡಿ !” – ರಾಕಿಂಗ್ ಸ್ಟಾರ್ ಯಶ್ ಶಾಕಿಂಗ್ ಹೇಳಿಕೆ!

समाचार

ಚಿಕ್ಕ ಹಳ್ಳಿಯಲ್ಲಿ ಹುಟ್ಟಿ, ದೊಡ್ಡ ಕನಸನ್ನು ಹೊತ್ತು, ಧ್ಯೇಯ ಬಿಡದೆ ಅದನ್ನು ಸಾಧಿಸಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಮಾತ್ರವಲ್ಲದೆ ಗಡಿ ದಾಟಿಯೂ ಕೀರ್ತಿ ಸಂಪಾಧಿಸಿ ಕನ್ನಡ ಚಿತ್ರರಂಗದ ಒಂದು ಕಿರೀಟವೆನ್ನಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಅವರ ಗಡ್ಡ ಬೆಳೆದಂತೆ ಅವರ ವಿವೇಕ, ವಿವೇಚನೆ ಹಾಗು ಬಧುಕಿನ ಬಗ್ಗೆ ಅರಿವು ಕೂಡ ವೃದ್ಧಿಯಾಗುತ್ತಿರುವಂತಿದೆ.
ಸಾಮಾನ್ಯವಾಗಿ ಸ್ಟಾರ್ ನಟರನ್ನು ತಾವು ಸಂಯೋಜಿಸುವ ಕಾರ್ಯಕ್ರಮಗಳಿಗೆ ಖಾಸಿಗಿ ವಾಹಿನಿಗಳು ನಿಮಂತ್ರಿಸಿ, ವೇದಿಕೆ ಮೇಲೆ ಒಂದೆರಡು ಸಿನಿಮಾ ಡೈಲಾಗ್ ಗಳನ್ನು ಹೇಳಿಸಿ ವೀಕ್ಷಕರ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಆದರೆ ಇತ್ತೀಚಿಗೆ  ಯಶ್ ರನ್ನು ಕರೆಸುವ ಕಾರ್ಯಕ್ರಮಗಳಲ್ಲಿ, ಅವರ ಬಳ್ಳಿ ಕೇವಲ ಒಂದೆರಡು ಡೈಲಾಗ್ ಗಳನ್ನು ಹೇಳಿಸುವುದಲ್ಲದೆ ಅವರನ್ನು ಜೀವನದ ಮೌಲ್ಯಗಳ ಕುರಿತು ಸಹ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಇದೇ ರೀತಿ ಖಾಸಗಿ ವಾಹಿನಿಯೊಂದು ನಿಯೋಜಿಸಿದ್ದ ‘ಕರುನಾಡ ಸಂಭ್ರಮ ಸಂಗೀತ ಸಂಜೆ’ ಎಂಬ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯಶ್ ರನ್ನು, ಕನ್ನಡದ ಪ್ರಖ್ಯಾತ ಹೋಸ್ಟ್ ಅನುಶ್ರೀ ಅವರು ಕೆಲವೊಂದು ಪ್ರಶ್ನೆಗಳನ್ನು ಕೇಳಿದರು. ನಂತರ ಯಶ್ ಈಗ ಎಲ್ಲೇ ಹೋದರು ತಮ್ಮ ಬಗ್ಗೆ ಪ್ರಶ್ನೆಗಳನ್ನು ಕೇಳುವ ಬದಲು ತಮ್ಮ ಮಕ್ಕಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಹಾಸ್ಯ ಮಾಡುತ್ತಿದ್ದ ವೇಳೆ ಕಾರ್ಯಕ್ರಮದಲ್ಲಿ ನೆರೆದಿದ್ದ ನೂರಾರು ಯಶ್ ಅಭಿಮಾನಿಗಳು ” ಆಯ್ರ…ಆಯ್ರ…ಆಯ್ರ” ಎಂದು ಯಶ್ ಮಗಳ ಹೆಸರನ್ನು ಜಪಿಸಲು ಶುರು ಮಾಡಿದರು. ಆಗ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಯಶ್, ” ನೋಡಿ ಎಂದಿಗೂ ಈ ತಪ್ಪನ್ನು ಮಾಡಬೇಡಿ. ಸಾಧಿಸುವ ಮುನ್ನ ಯಾರಿಗೂ ಗೌರವ ನೀಡಬೇಡಿ. ಯಾರೋ ದೊಡ್ಡ ವ್ಯಕ್ತಿಯ ಮಕ್ಕಳು ಎಂದು ಗೌರವ ನೀಡುವುದು ಸರಿಯಲ್ಲ. ಅವರು ಜೀವನದಲ್ಲಿ ಬೆಳೆದು ಏನಾದರು ಸಾಧನೆ ಮಾಡಿದಮೇಲೆ ಅವರಿಗೆ ಗೌರವ ನೀಡಿ. ಎಲ್ಲಾ ಮಕ್ಕಳು ಒಂದೇ. ಅಲ್ಲಿಯ ತನಕ ನಿಮ್ಮ ಪ್ರೀತಿ ನೀಡಿ, ಅಷ್ಟೇ ಸಾಕು ” ಎಂದು ತಮ್ಮ ಅಭಿಮಾನಿಗಳಿಗೆ ತಿಳಿ ಹೇಳಿದಲ್ಲದೆ, ಇಂದಿನ ಸಮಾಜದಲ್ಲಿ ತಮ್ಮ ಪೋಷಕರ ಸಾಧನೆ ಹಾಗು ಕೀರ್ತಿಯನ್ನೇ ಬಂಡವಾಳವನ್ನಾಗಿ ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತೊರುವ ‘ಸೊ -ಕಾಲ್ಡ್’ ದೊಡ್ಡ ವ್ಯಕ್ತಿಗಳನ್ನು ಟೀಕಿಸಿದರು. ಆ ವಿಡಿಯೋವನ್ನು ನೀವು ಇಲ್ಲಿ ನೋಡಬಹುದು (ವಿಡಿಯೋ):

ಅಲ್ಲದೆ ಸಿನಿ ರಸಿಕರು ಮಹತ್ವಾಕಾಂಕ್ಷೆಯಿಂದ ಕಾಯುತ್ತಿರುವ ಕೆಜಿಎಫ್ 2 ಚಿತ್ರದ ಬಗ್ಗೆ ಯಶ್ ರನ್ನು ಕೇಳಿದಾಗ, ಒಂದು ಪ್ರಮುಖ ಮಾಹಿತಿಯನ್ನು ರಿವೀಲ್ ಮಾಡಿದರು. ಅದರ ಬಗ್ಗೆ ಓದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ :

Leave a Reply

Your email address will not be published. Required fields are marked *